Quantcast
Channel: Platonic » Science
Viewing all articles
Browse latest Browse all 10

ಅಗ್ಮೆಂಟೆಡ್ರಿಯಾಲಿಟಿ–ರಿಯಲ್ಪ್ರಪಂಚಕ್ಕೊಂದುವರ್ಚುಅಲ್ಟಚ್

$
0
0

ಟರ್ಮಿನೇಟರ್ ನನ್ನೂ ಮೀರಿಸುವ ದೃಷ್ಟಿ ಬೇಕೆ? ಇನ್ನು ಕೆಲವೇ ವರ್ಷಗಳಲ್ಲಿ ನಿಮ್ಮ ಕಣ್ಣಿನಲ್ಲಿರು ಸಾಮಾನ್ಯ ಕಾಂಟ್ಯಾಕ್ಟ್ ಲೆನ್ಸ್ ಗಳು ಸೋಲಾರ್ ಪವರ್ ನಿಂದ ಶಕ್ತಿಪಡೆಯಬಲ್ಲ ವಿಶಿಷ್ಟ ಆಗ್ಮೆಂಟೆಡ್ ಲೆನ್ಸ್ ಗಳಿಂದ ಬದಲಾಯಿಸಲ್ಪಡುತ್ತವೆ. ಯುನಿವರ್ಸಿಟಿ ಆಫ್ ವಾಶಿಂಗ್ಟನ್ ಪ್ರೊಫೆಸರ್ ಬಬಕ್ ಅಮಿರ್ ಪರ್ವಿಜ್ ಮತ್ತು ಅವರ ಶಿಷ್ಯರು ಆಗ್ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನದ ಉಪಯೋಗವನ್ನು ಮೊಬೈಲ್ ಇತ್ಯಾದಿಗಳಿಂದ ಹೊರತಾಗಿ ಮನುಷ್ಯನ ಕಣ್ಣಿನಲ್ಲೂ ಬಳಸಬಹುದಾದ ಯೋಜನೆಯ ಮೇಲೆ ಕೆಲಸ ಮಾಡುತ್ತಿರುವುದೇ ಇದರ ಹಿಂದಿನ ರಹಸ್ಯವಾಗಿದೆ. ಈ ತಂತ್ರಜ್ಞಾನ ನೂರಾರು ಸೆಮಿಟ್ರಾನ್ಸ್ಪರಂಟ್ ಎಲ್.ಇ.ಡಿ ಗಳನ್ನು ಒಂದು ಸಣ್ಣ ಲೆನ್ಸ್ ನ ಮೇಲೆ ಸೇರಿಸಿ, ಅದನ್ನು ಧರಿಸುವ ಮನುಷ್ಯನಿಗೆ ಆಗ್ಮೆಂಟೆಡ್ ರಿಯಾಲಿಟಿಯ ಅನುಭವವನ್ನು ಅವನ ಕಣ್ಣುಗಳಿಂದಲೇ ಪಡೆಯುವ ಅವಕಾಶ ಮಾಡಿಕೊಡುತ್ತದೆ.


ಕಂಪ್ಯೂಟರಿನ ಸಹಾಯದಿಂದಭೌತಿಕ ಪ್ರಪಂಚದ ಚಿತ್ರವನ್ನು ಬಹು ನೈಜವೇ, ಸಹಜವೇ ಆದಂತೆ ತೋರುವ ವರ್ಚ್ಯಲ್ ದೃಶ್ಯಗಳನ್ನು, ನೇರವಾಗಿ ಅಥವಾ ಕಂಪ್ಯೂಟರಿನ ಸಹಾಯದಿಂದ ಇತರರಿಗೆ ದೊರೆಯುವಂತೆ ಮಾಡುವುದೇ ಆಗ್ಮೆಟೆಂಡ್ ರಿಯಾಲಿಟಿ ತಂತ್ರಜ್ಞಾನ. ಕಂಪ್ಯೂಟರಿನ ದೃಷ್ಟಿ ಹಾಗೂ ಅದರ ಶಕ್ತಿಯನ್ನು ಬಳಸಿ, ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ನೋಡಬಹುದಾದ ದೃಶ್ಯಗಳ ಜೊತೆ ಸಂವಾದ ನೆಡೆಸಬಹುದು ಅದೂ ನಾವೂ ಅಲ್ಲೇ ಸಂವಾದ ನೆಡೆಸುತ್ತಿರುವ ವ್ಯಕ್ತಿ ಅಥವಾ ಪ್ರದೇಶದಲ್ಲೇ ಇದ್ದುಕೊಂಡು ಎಂಬಂತಹ ಆಭಾಸದ ಜೊತೆಗೆ. ಕಂಪ್ಯೂಟರಿನ ಸರಿ – ಬೆಸ (೦-೧) ಬೈನರಿ ಸಂಖ್ಯೆಯ ಜಗತ್ತು ನಮ್ಮೊಡನೆ ಮಾತನಾಡುವಂತೆ, ಇನ್ನೆಲ್ಲೋ ಇರುವ ಜಗತ್ತಿನ ಮತ್ತೊಂದು ಪ್ರದೇಶವನ್ನು ನಾನಿದ್ದಲ್ಲೇ ತಂದು ತೋರಿಸುವಂತೆ ಮಾಡುವ ಈ ತಂತ್ರಜ್ಞಾನ ಜಗತ್ತನ್ನು ಮತ್ತೆ ಕಿರಿದಾಗಿಸುತ್ತಿರುವುದಂತೂ ನಿಜ.

ನಿಜ ಬದುಕಿನ ಅಣುಕು ಎಂದೆನ್ನ ಬಹುದಾದ ‘ಆಗ್ಮೆಂಟೆಡ್ ರಿಯಾಲಿಟಿ’ ಎಂಬ ಪದ ಮೊದಲು ಥಾಮಸ್ ಕಡೆಲ್ ಎಂಬಾತನಿಂದ ೧೯೯೦ರಲ್ಲಿ ಬಳಕೆಗೆ ಬಂತು ಎಂದು ನಂಬಲಾಗಿದೆ. ಇತ್ತೀಚೆಗೆ ಈ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಸಂಶೋದನೆಗಳಲ್ಲಿ ಮೇಲೆ ಹೇಳಿದ ಕಣ್ಣಿನ ಲೆನ್ಸ್ ಅಥವಾ ರೆಟಿನಾ ಬಗೆಗಿನ ಸಂಶೋಧನೆಯೂ ಒಂದು.

ನಿಮಗಿದು ಗೊತ್ತೇ?: – ನೋಕಿಯಾ ಎನ್ ೯೫ ಸ್ಮಾರ್ಟ್ ಫೋನ್ ನಲ್ಲಿ ಕೂಡ ನೀವು ಅಗ್ಮೆಟೆಂಡ್ ರಿಯಾಲಿಟಿಯ ಬಳಕೆಯನ್ನು AR Tower Defense Game ನಲ್ಲಿ ನೋಡಬಹುದು. ಇದರಲ್ಲಿ ಫಿಡ್ಯುಸಿಯರಿ ಮಾರ್ಕರ್ ಗಳನ್ನು (ನಿರ್ಧಿಷ್ಟ ಸ್ಥಾನಗಳನ್ನು ಗುರುತಿಟ್ಟುಕೊಳ್ಬಲ್ಲ ಸೂಚಕ)ಬಳಸಲಾಗಿದೆ.

ಅಗ್ಮೆಂಟೆಡ್ ರಿಯಾಲಿಟಿಯ ಮುಖ್ಯ ಹಾರ್ಡ್ವೇರ್ ವಸ್ತುಗಳು ಕಂಪ್ಯೂಟರಿನ ಸ್ಕ್ರೀನ್, ಮೌಸ್, ಕೀ ಬೋರ್ಡ ಇತ್ಯಾದಿ ಇನ್ಪುಟ್ ಡಿವೈಸ್ ಗಳು ಮತ್ತು ಕಂಪ್ಯೂಟರ್. ಶಕ್ತಿಯುತ ಸಿ.ಪಿಯು, ಕ್ಯಾಮೆರ, ವೇಗಮಾಪಕ (accelerometers), ಜಿ.ಪಿ.ಎಸ್ ಹಾಗೂ ಸಾಲಿಡ್ ಸ್ಟೇಟ್ ಕಾಂಪಾಸ್ ಇರುವ ಇತ್ತೀಚಿಗಿನ ಸ್ಮಾರ್ಟ್ ಫೋನುಗಳು ಆಗ್ಮೆಂಟೆಡ್ ರಿಯಾಲಿಟಿಯ ಬಳಕೆಗೆ ಬಹಳ ಅಚ್ಚುಮೆಚ್ಚಿನ ವೇದಿಕೆಯಾಗಿವೆ.

ಜಾಹಿರಾತು ಸಂಸ್ಥೆಗಳು, ಸರ್ಜರಿ ಇತ್ಯಾದಿ ಕ್ಲಿಷ್ಟಕರ ಕೆಲಸಗಳಿಗೆ, ದಿಕ್ಸೂಚಕ ಉಪಕರಣಗಳ ಬಳಕೆ ವಿಸ್ತರಿಸಲು, ಕಾರ್ಖಾನೆಗಳಲ್ಲಿ, ಮಿಲಿಟರಿ ವಲಯದಲ್ಲಿ, ಕೃಷಿ, ಶಿಕ್ಷಣ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಇದರ ಪ್ರಯೋಗ ಹಾಗೂ ಬಳಕೆ ನಿರಾಯಾಸವಾಗಿ ನೆಡೆಯುತ್ತಿದೆ. ಅಗ್ಮೆಟೆಂಡ್ ರಿಯಾಲಿಟಿ ಎಲ್ಲರ ಜೀವನದಲ್ಲೂ ಸಾಮಾನ್ಯ ಸಂಗತಿಯಾಗುವ ಕಾಲ ದೂರವಿಲ್ಲ.

ವೇಗದ ಬದುಕಿನಲ್ಲಿ ನೆಡೆಯುತ್ತಿರುವ ಕಂಪ್ಯೂಟರ್ ಮಯ ಜಗತ್ತಿನಲ್ಲಿ ಮನುಷ್ಯನ ಮನಸ್ಸನೂ ಹ್ಯಾಕ್ ಮಾಡಿ ವಿಶ್ಲೇಷಿಸುವ ಶಕ್ತಿ ಆಗ್ಮೆಂಟೆಡ್ ರಿಯಾಲಿಟಿಗಿದೆ. ಈ ತಂತ್ರಜ್ಞಾನ ಮನುಷ್ಯನ ವಿವೇಚನಾ ಶಕ್ತಿಯನ್ನೇ ತನ್ನ ಮುಟ್ಟಿಗೆ ತೆಗೆದುಕೊಳ್ಳದೆ ಬದುಕು ಹಸನಾಗಿಸುವ ಹೊಸ ಆಯಾಮವನ್ನು ಸೃಷ್ಟಿಸಿದರೆ ಮುಂಬರುವ ಜನಾಂಗಕ್ಕೆ ಮತ್ತಷ್ಟು ಮೈಲೇಜ್ ಕೊಡಬಲ್ಲದು.

ಚಿತ್ರ: – ಇನ್ಹೆಬಿಟ್ಯಾಟ್ ಡಾಟ್ ಕಾಮ್


Viewing all articles
Browse latest Browse all 10

Latest Images

Trending Articles





Latest Images